ಬಾರ್​​ ಗರ್ಲ್​​ ಜೊತೆ ಬಿಜೆಪಿ ನಾಯಕನ ಅಶ್ಲೀಲ ಡ್ಯಾನ್ಸ್​​.. ಹಲ್​​ಚಲ್​ ಎಬ್ಬಿಸಿದ ವಿಡಿಯೋ!

author-image
Ganesh Nachikethu
Updated On
ಬಾರ್​​ ಗರ್ಲ್​​ ಜೊತೆ ಬಿಜೆಪಿ ನಾಯಕನ ಅಶ್ಲೀಲ ಡ್ಯಾನ್ಸ್​​.. ಹಲ್​​ಚಲ್​ ಎಬ್ಬಿಸಿದ ವಿಡಿಯೋ!
Advertisment
  • ಬಾರ್​​ ಗರ್ಲ್​ ಜೊತೆ ಬಿಜೆಪಿ ನಾಯಕನೋರ್ವ ಅಶ್ಲೀಲ ಡ್ಯಾನ್ಸ್​​
  • ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿ ಸಮಾಜವಾದಿ ಪಕ್ಷ ಕಿಡಿ!
  • ಉತ್ತರ ಪ್ರದೇಶ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವಿಡಿಯೋ

ಲಕ್ನೋ: ಬಾರ್​​ ಗರ್ಲ್​ ಜೊತೆ ಬಿಜೆಪಿ ನಾಯಕನೋರ್ವ ಅಶ್ಲೀಲವಾಗಿ ಹೆಜ್ಜೆ ಹಾಕಿರೋ ವಿಡಿಯೋ ಒಂದು ವೈರಲ್​ ಆಗಿದೆ. ಬಿಜೆಪಿ ನಾಯಕನ ಅಶ್ಲೀಲ ಡ್ಯಾನ್ಸ್​ ವಿಡಿಯೋವನ್ನು ಸಮಾಜವಾದಿ ಪಕ್ಷ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ.

ಇನ್ನು, ಬಿಜೆಪಿ ನಾಯಕನ ಈ ವಿಡಿಯೋ ಉತ್ತರ ಪ್ರದೇಶ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಎಲ್ಲರ ಮೊಬೈಲ್​ನಲ್ಲೂ ವಿಡಿಯೋ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆ ಶುರುವಾಗಿದೆ. ಅದರಲ್ಲೂ ಎಸ್​ಪಿ ನಾಯಕರಂತೂ ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ.

ಸಂಸ್ಕಾರ, ಸಂಸ್ಕೃತಿ, ಧರ್ಮ ಮತ್ತು ದೇಶಪ್ರೇಮದ ಬಗ್ಗೆ ಪಾಠ ಮಾಡೋ ಬಿಜೆಪಿ ನಾಯಕರ ಅಸಲಿ ಮುಖ ಇದು. ಇವರು ಅತ್ಯಾಚಾರಿಗಳು ಎಂದು ಎಸ್​​ಪಿ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿ ಬರೆದುಕೊಂಡಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.


">August 1, 2024

ಎಸ್​​ಪಿ ವಿರುದ್ಧ ಆಕ್ರೋಶ!

ಯಾರೋ ರಾಷ್ಟ್ರವಾದಿ ಅನ್ನೋ ಹೆಸರಿನ ಖಾತೆಯಿಂದ ಎಸ್​ಪಿ ಪೋಸ್ಟ್​ಗೆ ಕಾಮೆಂಟ್​ ಮಾಡಲಾಗಿದೆ. ಆತ ಬಾರ್‌ ಗರ್ಲ್ ಜೊತೆ ನಿಂತಿದ್ದಾನೆ ಹೊರತು ನಿಮ್ಮ ಕುಟುಂಬ ಸದಸ್ಯರೊಂದಿಗಲ್ಲ. ನೀವು ಅತ್ಯಾಚಾರಿಗಳ ಪರ ನಿಲ್ಲುವುದು, ಬಿಜೆಪಿ ಅಲ್ಲ ಎಂದು ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕದ ಈ ಜಿಲ್ಲೆಗಳಲ್ಲಿ 5 ದಿನ ಭರ್ಜರಿ ಮಳೆ; ನೀವು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment